Wednesday 13 July 2016

"ನಾನು ಸಂಚಾರ ನಿಯಮ ಪಾಲನಾ ದಳಪತಿಯಾದಾಗ"


"ದೇಶ ನಮಗೆ ಏನು ಕೊಟ್ಟಿತು ಅನ್ನುವುದಕ್ಕಿಂತ ದೇಶಕ್ಕೆ ನಾನು ಏನು ಕೊಟ್ಟೆ" ಎಂಬ ಪ್ರಶ್ನೆ ನನ್ನ ಕಾಡುತ್ತಿತ್ತು.
                         ನನ್ನ  ದೇಶಕ್ಕೆ ಸೇವೆ ಮಾಡಲು ಯಾವ ದಾರಿಯು ಕಾಣುತ್ತಿಲವಲ್ಲ ಎಂದು ಯೋಚಿತ್ತಿದ್ದ ನನಗೆ ಅದೃಷ್ಟವೋ ಏನೋ ನನ್ನ ಅಧ್ಯಾಪಕರು ಬಂದು “Traffic warden squad ” ಆಗಿ ಮಂಗಳೂರು ಸಂಚಾರಿ ಪೋಲಿಸ್ ಇಲಾಖೆಗೆ ಹಾಗೂ ಸಾರ್ವಜನಕರಿಗೆ ಸಹಾಯ ಮಾಡಲು ಯಾರಿಗೆಲ್ಲ ಆಸಕ್ತಿ ಇದೆ, ಅವರು ಬಂದು ನನ್ನನ್ನು ಬೇಟಿ ಮಾಡಿ" ಎಂದರು. ತರಗತಿ ಮುಗಿದ ಮೇಲೆ ಅಧ್ಯಾಪಕರನ್ನು ಬೇಟಿ ಮಾಡಿ ನನ್ನ ಆಸಕ್ತಿಯನ್ನು ತಿಳಿಸಿದೆ. ಮರುದಿನ ಮಂಗಳೂರು ಕಮಿಶನರ್ ಕಛೇರಿಯಲ್ಲಿ ಸಭೆ ಇರುವ ವಿಷಯವನ್ನು ತಿಳಿಸಿದರು.
                        ಮಾರನೇ ದಿನ ಸುಮಾರು ೧೦ ಗಂಟೆಗೆ ನಾನು ಮತ್ತು ನನ್ನ ಕಾಲೇಜಿನ ವಿದ್ಯಾರ್ಥಿನಿಯರು ಕಮಿಶನರ್ ಕಛೇರಿಗೆ ತೆರಳಿದೆವು. ನಮ್ಮ ಕಾಲೇಜಿನ ವಿದ್ಯಾರ್ಥಿನಿಯರಲ್ಲದೆ ಮಂಗಳೂರಿನ ಇತರ ಕಾಲೇಜಿನ ವಿದ್ಯಾರ್ಥಿ / ವಿದ್ಯಾರ್ಥಿನಿಯರು ಅಲ್ಲಿದರು. ಕಮಿಶನರ್ ಶ್ರೀ. ಉದಯ್ ಕುಮಾರ್ ರವರು “Traffic warden squad ” ಆಗಿ ನಾವು ಎನು ಮಾಡಬೇಕು ಎಂದು ಹೇಳಿದರು. ನಮ್ಮ ಆಗ್ನೇಸ್ ಕಾಲೇಜಿನ ವಿದ್ಯಾರ್ಥಿನಿಯರ ಗುಂಪಿಗೆ ಶ್ರೀ. ರೋಶನ್ ರವನ್ನು warden ಆಗಿ ನೇಮಿಸಿದರು.
                        ನಮಗೆ ಒಂದು ವಾರ “TWS” ನ ತರಬೇತು ನೀಡಿದರು. ಈ ತರಬೇತಿಯಲ್ಲಿ ರಸ್ತೆಯ ನಿಯಮಗಳು, ಪಥಸಂಚಲನ ಮತ್ತು ರಸ್ತೆಯಲ್ಲಿ ಕೆಲಸಮಾಡುವಾಗ ಎಷ್ಟು ಎಚ್ಚರ ವಹಿಸಬೇಕು ಎಂಬುದನ್ನು ಹೇಳಿದರು. ತರಬೇತಿಯ ಕೊನೆಯ ದಿನದಂದು “TWS” ಸಮವಸ್ತ್ರವನ್ನು ನೀಡಿದರು.
                         ಅಕ್ಟೋಬರ್ ೨, ಗಾಂಧೀ ಜಯಂತಿ ದಿನದಂದು ಮಂಗಳೂರಿನಲ್ಲಿ “TWS” ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಿದರು. ಮಿಲಾಗ್ರಿಸ್ ನಿಂದ ಕಮಿಶನರ್ ಕಛೇರಿಯವರೆಗೆ  ನಾವೆಲ್ಲರೂ ಸಮವಸ್ತ್ರವನ್ನು ಧರಿಸಿ ಪಥಸಂಚಲನ ಮಾಡಿದ್ದೆವು. ಉದ್ಘಾಟನಾ ಕಾರ್ಯಕ್ರಮ ಮುಗಿದ ತಕ್ಷಣ ಮನೆಗೆ ಹೋಗಿ ಪರೀಕ್ಷೆಗೆ ತಯಾರಿ ಮಾಡಲು ಆರಂಭಿಸಿದೆ. ಅಕ್ಟೋಬರ್ ತಿಂಗಳಿನಲ್ಲಿ ಪರೀಕ್ಷೆ ಇದ್ದ ಕಾರಣ “TWS” ಆಗಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಪರೀಕ್ಷೆ ಮುಗಿದ ಮರು ದಿನವೇ ಕೆಲಸ ಮಾಡಲು ರಸ್ತೆ ಬದಿಯಲ್ಲಿ ನಿಂತುಕೊಂಡೆ. ಮೊದಲು ಸ್ವಲ್ಪ ಭಯ ಅನಿಸಿದರೂ, ಸಾರ್ವಜನಿಕರಿಂದ ಒಳ್ಳೆ ಪ್ರತಿಕ್ರಿಯೆ ದೊರಕಿತು, ಅಂದು ಸಂತೋಷವೂ ಜೊತೆಯಾಯಿತು. ನಮ್ಮ ಸೇವೆಯನ್ನು ನೋಡಿ ಹಲವರು ಧನ್ಯವಾದ ಹೇಳುತ್ತಿದ್ದರು. ಅದರೇ ಕೆಲವರ ನಿರ್ಲಕ್ಷ ಬೇಸರ ತರುತ್ತಿತ್ತು.
                         ಅವಕಾಶ ಬಂದಾಗ ಬೇಡವೆಂದು ಕೈಚ್ಚೆಲ್ಲಿ ಸುಮ್ಮನಿದ್ದರೆ ನನ್ನನ್ನು ಕಾಡುತ್ತಿದ್ದ ಪ್ರಶ್ನೆ ಯಕ್ಷ ಪ್ರಶ್ನೆಯಾಗಿಯೇ ಉಳಿದಿರುತ್ತಿತ್ತು. “Traffic warden squad ” ಆಗಿ ನಾನು ಸಾರ್ವಜನಿಕರಿಗೆ ಮಾಡಿದ ಸಹಾಯವು ಒಂದು ಸಣ್ಣ ಮಟ್ಟದ ಅವಕಾಶ ಎಂದು ತಿಳಿದು ಹೆಚ್ಚಿನ ಅವಕಾಶಗಳ ಬೆನ್ನಟ್ಟಿ ಮುಂದಕ್ಕೆ ಸಾಗುತ್ತಿದ್ದೇನೆ.

3 comments: