Tuesday, 28 June 2016

"ವಿಕಿಪೀಡಿಯಕ್ಕೆ ನನ್ನ ಪ್ರವೇಶ"


ಆಗಷ್ಟೇ ನಾನು ಮೂರನೇ ಸೆಮಿಸ್ಟರ್ ರಜೆಯನ್ನು ಮುಗಿಸಿ ಕಾಲೇಜಿಗೆ ಬಂದಿದ್ದೆ. ಮೊದಲದಿನದ ಕನ್ನಡ ತರಗತಿಯಲ್ಲಿ ನಮ್ಮ ಸರ್ ಬಂದು "ಡಿಸೆಂಬರ್ ೧೦,೧೧,೧೨ ವಿಕಿಪೀಡಿಯ ಕಾರ್ಯಗಾರ ಇದೆ ಆಸಕ್ತಿ ಇರುವವರು ನಿಮ್ಮ ಹೆಸರನ್ನು ಕನ್ನಡ ಕಾರ್ಯದರ್ಶಿಯಲ್ಲಿ ನೋಂದಾಯಿಸಿ" ಎಂದರು . ಇದನ್ನು ಕೇಳಿದ ತಕ್ಷಣ ನನಗೆ ಖುಷಿಯಾಯಿತು. ನನ್ನ ಗೆಳತಿಯೊಬ್ಬಳು ರಜೆಯಲ್ಲಿ ಏನು ಮಾಡುತ್ತಿದ್ದಿಯಾ ಎಂದು ಕೇಳಿದಾಗಲೆಲ್ಲಾ ವಿಕಿಪೀಡಿಯದಲ್ಲಿ ಲೇಖನ ಬರೆಯುವುದು ಎಂದು ಹೇಳುತ್ತಿದ್ದಳು. ನನ್ನ ಗೆಳತಿಯರಿಗೆ ಕಾರ್ಯಗಾರಕ್ಕೆ ಬರುವ ಮನಸ್ಸು ಇಲ್ಲದಿದ್ದರು ನನಗೋಸ್ಕರ ಒಲ್ಲದ ಮನಸ್ಸಿನಿಂದ ನೋಂದಾಯಿಸಿಕೊಂಡರು.

ಅಂತು-ಇಂತು ನಾನು ಕಾಯುತ್ತಿದ್ದ ದಿನ ಡಿಸೆಂಬರ್ ೧೦ನೇ ತಾರೀಕು ಬಂತು. ಆ ದಿನ ಏನೋ ಮನಸ್ಸಿನಲ್ಲಿ ಭಯ, ಆತಂಕ, ಎಲ್ಲವನ್ನು ಒಮ್ಮೆಲೇ ತಿಳಿದು ಕೊಳ್ಳುವ ಆತುರ ಹಾಗೂ ಒಂದು ಕಡೆಯಲ್ಲಿ ಖುಷಿ. ಕಾರ್ಯಗಾರದಲ್ಲಿ ಭಾಗವಹಿಸುವವರನ್ನು ಬೆಳ್ಳಿಗೆ ೯ ಗಂಟೆಗೆ ಬರುವಂತೆ ಹೇಳಿದರು. ನಾನು ಮತ್ತು ನನ್ನ ಗೆಳತಿಯರು ೮.೫೫ ಕ್ಕೆ ಹೋಗಿ ಕಾರ್ಯಗಾರ ನಡೆಯುವ ಜಾಗದಲ್ಲಿ ಕುಳಿತುಕೊಂಡೆವು. ೯.೩೦ ಗೆ ಉದ್ಗಾಟನೆ ಕಾರ್ಯಕ್ರಮ ಆರಂಭವಾಯಿತು. ಡಾ|| ಪವನಜ ರವರು ವಿಕಿಪೀಡಿಯ ಎಂದರೆ ಏನು ಎಂಬುದನ್ನು ಹೇಳಿದರು. ನನಗೆ ಈಗಲೂ ನೆನಪಿರುವ ಸಾಲು ಎಂದರೆ "ವಿಕಿಪೀಡಿಯ ಒಂದು ಸ್ವತಂತ್ರ ವಿಶ್ವಕೋಶ".

ಉದ್ಗಾಟನ ಕಾರ್ಯಕ್ರಮ ಮುಗಿದ ನಂತರ ಭಾಗವಹಿಸುವವರ ಸಂಖ್ಯೆ ತುಂಬಾ ಇದುದ್ದರಿಂದ ನಮ್ಮನ್ನು ಎರಡು ಗುಂಪುಗಳಾಗಿ ಮಾಡಿದ್ದರು. sandbox ನಲ್ಲಿ ನಮ್ಮ ಬಗ್ಗೆ ಬರೆಯಲು ಹೇಳಿದರು. ನನಗೆ ಕನ್ನಡ ಟೈಪಿಂಗ್ ಕಷ್ಟವೆನಿಸಲಿಲ್ಲ.
ಕಾರ್ಯಗಾರದ ಎರಡನೇ ದಿನ ನಮಗೆ ಕರಾವಳಿ ಲೇಖಕಿಯರ ಬಗ್ಗೆ ಲೇಖನ ಮಾಡುವಂತೆ ಹೇಳಲಾಗಿತ್ತು. ಉತ್ತಮ ಲೇಖನವನ್ನು ಹೇಗೆ ಬರೆಯುವುದು ಎಂಬುದನ್ನು ಹೇಳಿಕೊಟ್ಟರು. ನಮಗೆ ನೀಡಿದ ಸೂಚನೆಯಂತೆ ನಾನು ಯು. ಮಹೇಶ್ವರಿ ಅವರ ಬಗ್ಗೆ ಲೇಖನ ಬರೆದೆ. ಲೇಖನ ಬರೆದು ಅದನ್ನು ವಿಕಿಪೀಡಿಯಕ್ಕೆ ಸೇರಿಸುವಾಗ ಸಂತೋಷವಾಯಿತು.

ಕಾರ್ಯಗಾರದ ಕೊನೆಯ ದಿನ ಡಿಸೆಂಬರ್ ೧೨ ಬಂತು . ಕೊನೆಯ ದಿನವು ನಾವು ಲೇಖನ ಬರೆಯುವುದನ್ನು ಮುಂದುವರೆಸಿದ್ದೆವು. ಕೊನೆಯ ದಿನ ಸಂತ ಆಲೋಶಿಯಸ್ ಕಾಲೇಜು, ಮಂಗಳೂರು ಇಲ್ಲಿನ ಪದವಿ ವಿದ್ಯಾರ್ಥಿಗಳು ನಮಗೆ ಸಹಾಯ ಮಾಡಲು ಬಂದಿದ್ದರು.ಕಾರ್ಯಗಾರದ ಕೊನೆಯ ಹಂತದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ಕೊಟ್ಟರು. ಕಾರ್ಯಗಾರ ಮುಗಿಸಿ ಮನೆಗೆ ಹೋಗುವಾಗ ಮನಸ್ಸಿನಲ್ಲಿ ದು:ಖ ತುಂಬಿತ್ತು.

ಮೂರು ದಿನದ ವಿಕಿಪೀಡಿಯ ಕಾರ್ಯಗಾರದಲ್ಲಿ ಒಟ್ಟು ೨೦ ವಿದ್ಯಾರ್ಥಿಗಳು, ೨ ಉಪಾನ್ಯಸಕರು ಮತ್ತು ೨ ಗ್ರಂಥಾಪಾಲಕಿಯರು ಭಾಗವಹಿಸಿದರು. ನಾವೆಲ್ಲರೂ ಸೇರಿ ಸುಮಾರು ೫೦ ಲೇಖನಗಳನ್ನು ವಿಕಿಪೀಡಿಯಕ್ಕೆ ಸೇರಿಸಿದ್ದೆವು.ವಿಕಿಪೀಡಿಯದಲ್ಲಿ ಲೇಖನ ಹಾಕುವಾಗ ನನಗೆ ಖುಷಿ ಹಾಗು ತೄಪ್ತಿ ಸಿಗುತ್ತದೆ ಏಕೆಂದರೆ ನಾನು ಹಾಕಿದ ಲೇಖನದಿಂದ ಬೇರೆಯವರಿಗೆ ಉಪಯೋಗವಾಗುತ್ತದೆ ಮಾತ್ರವಲ್ಲದೆ ನನಗೆ ವಿಷಯಗಳ ವಿಸ್ತಾರವಾದ ಜ್ಞಾನವೂ ಸಿಗುತ್ತದೆ.

ಗ್ರಂಥಾಲಯಕ್ಕೆ ಹೋಗಿ ಪುಸ್ತಕ ಓದುವ ಅಭ್ಯಾಸ ನನಗೆ ಇರಲಿಲ್ಲ ಆದರೆ ಮೂರು ದಿನದ ವಿಕಿಪೀಡಿಯ ಕಾರ್ಯಗಾರದಲ್ಲಿ ಭಾಗವಹಿಸಿದ ನಂತರ ದಿನಲೂ ತರಗತಿ ಮುಗಿದ ಮೇಲೆ ಗ್ರಂಥಾಲಯಕ್ಕೆ ಹೋಗಿ ಹಲವಾರು ಪುಸ್ತಕಗಳನ್ನು ಓದುವುದನ್ನು ರೂಢಿಮಾಡಿಕೊಂಡೆ. ನನಗೆ ಗೊತ್ತಿಲ್ಲದ್ದ ಹಾಗೆ ಹಲವಾರು ವಿಷಯಗಳ ಬಗ್ಗೆ ಸಂಶೋಧನೆ ಮಾಡುವುದನ್ನು ಕಲಿತುಕೊಂಡೆ. ವಿಷಯಗಳನ್ನು ತಿಳಿದು ಕೊಳ್ಳುವ ಕುತೂಹಲವೂ ಹೆಚ್ಚಾಯಿತು.


ಬಹುಶ ನನ್ನ ಕಾಲೇಜು ಆದ ಸಂತ ಆಗ್ನೇಸ್ (ಸ್ವಾಯತ್ತ) ಪದವಿ ಕಾಲೇಜು, ಇಲ್ಲಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ|| ಸಂಪೂರ್ಣನಂದ ಮತ್ತು ಉಪಾನ್ಯಸಕಿ  ಡಾ|| ಶೈಲಾಜಾ ಕೆ. ವಿಕಿಪೀಡಿಯ ಕಾರ್ಯಗಾರದ ಬಗ್ಗೆ ಚಿಂತಿಸದ್ದೆ ಇದ್ದರೆ, ನನ್ನ ಸಮಾಜಕ್ಕೆ ವಿಕಿಪೀಡಿಯ ದಿಂದ ಚಿಕ್ಕ ಸೇವಯನ್ನು ಮಾಡಲು ಆಗುತ್ತಿರಲಿಲ್ಲ. ನನ್ನ ಕಾಲೇಜು ಮತ್ತು ಕನ್ನಡ ವಿಭಾಗಕ್ಕೆ ಧನ್ಯವಾದ ಹೇಳಲು ಇಷ್ಟ ಪಡುತ್ತೇನೆ.


ನಾವು ತಪ್ಪು ಮಾಡಿದಾಗ ನಮ್ಮ ಮೇಲೆ ಕೋಪ ಮಾಡಿಕೊಳ್ಳದೆ ನಮ್ಮನ್ನು ತಿದ್ದಿ ಮತ್ತು ಒಳ್ಳೆಯ  ಲೇಖನವನ್ನು ಬರೆಯಲು ಹೇಳಿಕೊಟ್ಟ ಡಾ|| ಪವನಜ, ಡಾ|| ವಿಶ್ವನಾಥ್ ಬದಿಕಾನ ಹಾಗೂ ಅನಂತ್ ಸುಬ್ರಾಯ್ ರವರಿಗೆ ನಾನು ಅಬಾರಿಯಾಗಿರುತ್ತೇನೆ. ದಿನದಿಂದ ದಿನಕ್ಕೆ ವಿಕಿಪೀಡಿಯದಲ್ಲಿ ಹೊಸ ವಿಷಯಗಳನ್ನು ಕಲಿಯುತ್ತ ಸಾಗುತ್ತಿದ್ದೇನೆ.

9 comments:

 1. ಬ್ಲಾಗ್ ಲೋಕಕ್ಕೆ ಸುಸ್ವಾಗತ. ಇನ್ನಷ್ಟು ಬರಲಿ

  ReplyDelete
 2. ಗುಡ್. ವಿಕಿಪೀಡಿಯದಲ್ಲಿ ಹೆಚ್ಚು ಹೆಚ್ಚು ಬರೆಯಿರಿ. ಜೊತೆಗೆ ಬ್ಲಾಗ್ ಕೂಡ ಬರೆಯುತ್ತಿರಿ. ಸ್ವಾಗತ

  ReplyDelete
 3. This comment has been removed by the author.

  ReplyDelete
 4. This comment has been removed by the author.

  ReplyDelete
 5. Welcome to the blog world. Continue doing this good job. Best of luck...

  ReplyDelete
 6. Welcome to blogspot n wiki.. all the best

  ReplyDelete
 7. It was so good reading about your contributions to Wikipedia. What happened next? did you stop writing? Please continue your contributions.

  ReplyDelete
 8. divya madam pls send ur cantect number

  ReplyDelete